ನಮಸ್ಕಾರ ಪ್ರಿಯ ಓದುಗರೆ,
ಪ್ರಸ್ತುತದಲ್ಲಿ ನಾವೆಲ್ಲರು ಒಂದು ಪ್ರಭಾವಶಾಲಿ ಅವಧಿಯಲ್ಲಿ ಬಾಳುತ್ತಿದ್ದೇವೆ. ಮೊದಲಿನಿಂದನೂ ಸೃಜನಶೀಲ ಬರಹಗಾರರು ಅವರವರ ಕಾಲದಲ್ಲಿ ಜನಸಾಮಾನ್ಯರಿಗೆ ಕಾಣದ ಮತ್ತು ಊಹಿಸಲಾಗದ ಪರಿಕಲ್ಪನೆಗಳನ್ನು ತಮ್ಮ ಕಲ್ಪಾನಿಕ ಕಥೆಗಳಲ್ಲಿ ವಿಸ್ತಾರವಾಗಿ ಬಿಡುಮಾಡಿ ಓದುಗಾರರನ್ನು ಮೋಹಿಸುತ್ತಿದ್ದರು. ಕೆಲವು ಶತಮಾನಗಳು ಹಿಂದೆ ಡಾ-ವಿಂಚಿ ಹಾರುವ ವಾಹನಗಳ ಅಂಚು ಬರೆದಿ ಬಿಡು
ಇದೀಗ ತಂತ್ರಜ್ಞಾನ ಮುಖಾಂತರ ಎಷ್ಟು ಸಾಧಾರಣವಾಗಿಬಿಟ್ಟಿದೆ ಎಂದರೆ ಬಹುತೇಕ ಜನರು ಇವು ಹೊಸ ಶೋಧನಗಳು ಬದುಕಿನ ಅಗತ್ಯಗಳೆಂದೇ ಭಾವಿಸುತ್ತಾರೆ. ಹೊಸ ಶೋಧನೆಗಳಲ್ಲಿ ಅಂತರ್ಜಾಲ ಸಂಪರ್ಕವು ಅತೀಮುಖ್ಯದ್ದು. ಇದು ಭಾರತೀಯ ಸಮಾಜದ ಮೇಲೆ ಪ್ರಭಾವ ಬೀರಿದೆ ಅಂದರೆ ಸಮಾಜದೆಲ್ಲ ವಿಂಗಡಣೆಗಳನ್ನು ಮೀರೀ, ಅಂತರ್ಜಾಲ ಸಂಪರ್ಕ ಬೇಕೇ ಬೇಕು ಎನ್ನುವ ಭೇಡಿಕೆಯಿರುತ್ತದೆ. ಈಗ ಎಲ್ಲಾರ ಪ್ರತಿನಿತ್ಯದ ಚಟುವಟಿಕೆಗಳಿಗೆ ಅಂತರ್ಜಾಲ ಸಂಪರ್ಕವಿಲ್ಲದೆ ನಡೆಸಲು ಅಸಾದ್ಯವಾದ ಮಾತು – ದಿನಸಿ ಅಂಗಡಿಯಲ್ಲಿ ತರಕಾರಿ ಕೊಳ್ಳುವುದಕ್ಕಾಗಲೀ, ಬ್ಯಾಂಕ್ ಅಲ್ಲಿ ಹಣಕಾಸು ವಿಚಾರಗಳನ್ನು ಮುಂದುವರಿಸಲು ಆಗಲಿ, ಆಥವಾ ಕೆಲಸ ಮುಗಿದ ನಂತರ ಮನೆಯಲ್ಲಿ ಮನಸ್ಸನ್ನು ತಣ್ಣಾಗಿಸಲು ಮನರಂಜನಕ್ಕಾಗಲೀ, ಇವೆಲ್ಲವುದ್ದಕ್ಕೂ ಅಂತರ್ಜಾಲ ಬೇಕು. ಇದು ನಮ್ಮ ಪ್ರಸ್ತುತ ಕಾಲದೊಂದು ಕುತೂಹಲಕಾರಿ ಬೆಳವಣಿಗೆ.
ಭಾರತದ ಚಿಗುರುತ್ತಿರುವ ತಂತ್ರಜ್ಞಾನಿಕ ಹಾದಿಯಲ್ಲಿ ಕರ್ನಾಟಕವು ಭಾರತದೊಂದು ತಾಂತ್ರಿಕ ಹಾಗು ವಿಜ್ಞಾನಿಕ ಕೇಂದ್ರ ಆಗಿದೆ. ಭಿನ್ನ ಕ್ಷೇತ್ರಗಳ ಸರ್ಕಾರಿ ಸಂಸ್ಥೆಗಳು ಹಿಡಿದೂ, ಜಾಗತ್ತಿನ ಅತೀದೊಡ್ಡ ಬಹುರಾಷ್ಟ್ರೀಯ ನಿಗಮಗಳ ಮುಖ್ಯ ಕಚೇರಿಗಳೂ ಕರ್ನಾಟಕದಲ್ಲಿ ಸಿಗುತ್ತಾವೆ (ವಿಷೇಶವಾಗಿ ತಂತ್ರಜ್ಞಾನ ಕ್ಷೇತ್ರಕ್ಕೆ ಕರ್ನಾಟಕವು ಪ್ರಸಿದ್ಧತೆಯನ್ನು ಹೊಂದಿದೆ). ಇಂತಹ ಆಧುನಿಕ, ದೂರದೃಷ್ಟಿಯ ರಾಜ್ಯದ ವಾಸಿಗರ ತಾಂತ್ರಿಕ ತಿಳುವಳಿಕೆ, ಗ್ರಹಣೆ, ಮತ್ತು ಕೌಶಲ್ಯಗಳಲ್ಲಿ ದೇಶದ ಉನ್ನತ ಸ್ಥಾನ ಪಡೆದಿದ್ದವರು ಇರಬೇಕು ಎಂದು ಅಂದಿಕೊಳ್ಳುವುದು ತಪ್ಪಾಗದಿದ್ದರೂ, ನೈಜತೆ ವಿರುದ್ಧವಾಗಿಯೇ ಇದೆ. ತಂತ್ರಜ್ಞಾನ ಲಭ್ಯಾವಾಗುವುದು, ಮತ್ತು ತಾಂತ್ರಿಕ ತಿಳುವಳಿಕೆಯ ಹೆಚ್ಚಿಸುವು ವ್ಯತ್ಯಾಸ ಕರ್ನಾಟಕದಲ್ಲಿ ವಿಪರೀತ ಸ್ಫುಟವಾಗಿ ಕಾಣಿಸುತ್ತದೆ. ಎಲ್ಲಾರ ಕೈಯಲ್ಲೂ ಜಂಗಮವಾಣಿ (smartphone) ಸಿಗುವುದು ಒಂದು ಅದ್ಭುತ್ವಾದ ಬೆಳವಣಿಗೆ ಆದರೆ ಜನಸಾಮಾನ್ಯರಿಗೆ ತಮ್ಮ ಖಾಸಗಿ ಮಾಹಿತಿಯ ಸಂರಕ್ಷಣೆ, ದತ್ತಾಂಶ ಸೋರಿಕೆ, ತಾಯ್ನುಡಿಯಲ್ಲಿ ಸಂದೇಶವನ್ನು ಬರೆಯುವುದು ಎಂಬಿತ್ಯಾದಿ ವಿಷಯಗಳಲ್ಲಿ ಹಿಡಿತ ಇನ್ನೂ ಕಡಿಮೆಯೇ ಇದೆ. ಅಂಕೀಯ ಲೋಕದ ಅರಿವು ಹೆಚ್ಚಾದಷ್ಟು ಜನರಿಗೆ ತಮ್ಮ ಹಕ್ಕುಗಳ ವಿರುದ್ಧದ ಏನೇ ಬೆಳವಣಿಗೆಯಾದರೂ, ಅದನ್ನು ಕಡೆಗಣಿಸದೇ ಪ್ರತಿಭಟಿಸಲು ಸಜ್ಜರಾಗಬಹುದು.
ಮುಖಪುಟದಲ್ಲಿ ಹೇಳಿದಂತೆ, ಈ ಬ್ಲಾಗು ಕನ್ನಡ ನುಡಿ, ತಂತ್ರಜ್ಞಾನ, ಮತ್ತು ಕನ್ನಡ ಸಮಾಜದ ಅಂತರವನ್ನು ಅನ್ವೇಶಿಸಲು ಶುರುಮಾಡಿದ್ದೇನೆ. ಈ ದಾರಿ ಹೇಗೆ ಅರಳುತ್ತೋ, ಯಾವ ದಿಕ್ಕಲ್ಲಿ ಹೋಗುತ್ತೋ ಎನ್ನುವ ದೂರದೃಷ್ಟಿ ಇಲ್ಲದೇಯಿರುವ ನನಗೆ ನಿಮ್ಮೆಲ್ಲರ ಪ್ರೀತಿ, ಬೆಂಬಲ, ಮತ್ತು ಆಸಕ್ತಿ ಇರಲಿ ಎಂದು ಆಶಿಸುತ್ತ, ಈ ಮೊದಲ ಲೇಖನವನ್ನು ಇಲ್ಲಿ ಮುಗಿಸುತ್ತೇನೆ.

Leave a comment